Bhavaprakashika

Mettilotsava Nudi (15 Sep 25)

 || हरे श्रीनिवास हरि सर्वोत्तम । वायु जीवोत्तम । श्री गुरुभ्यो नमः ||

 *NOTE: Choose desired output script using Aksharamukha (screen top-right).

ಮೆಟ್ಟಿಲೋತ್ಸವ ನುಡಿ

ನುಡಿ ದೇವಿ ನುಡಿಸೆನ್ನ ನುಡಿಗಳ
ಮೆಟ್ಟಿಲೋತ್ಸವದ ಚಿಂತನೆಗಳ

ಬೆಟ್ಟದ ತಪ್ಪಲಲಿ ಕಂಡ ಮುಖಗಳು
ಹಿಂದೆ ಕಂಡವು ಕೆಲವು ಕಾಣದಿಹ ಹಲವು

“ಹರಿ ಸರ್ವೋತ್ತಮ ವಾಯು ಜೀವೋತ್ತಮ”
ನುಡಿ ತಾರಸ್ಥಾಯಿಯಲಿ ತುಂಬಿದವು ಗಗನ

ಒಂದೆ ಕೊರಳಲಿ ಹಾಡಿದ “ಬಿಡೆನೋ ನಿನ್ನಂಘ್ರಿ
ಶ್ರೀನಿವಾಸ” “ಗೊವಿಂದ ಹರಿ ಗೊವಿಂದ” ಭಕ್ತಿ ಗೀತೆಗಳು

ಮುಟ್ಟಿದವು ತವಕದಿ ತಿಮ್ಮಪ್ಪನ ಪಾದಗಳು
ಶಕ್ತಿಯನಿತ್ತವು ತಟ್ಟಿ ಹೃದಯವ

ಕೋಲಾಟ ಹೊಡೆತಕೆ ಕಂಪಿಸಿದ ಬೆಟ್ಟ
ತಿಮ್ಮಪ್ಪನ ಅರಿವಿಗೆ ಬಾರದಿಹದೆ?

ಆ ಭಕ್ತಿ ಆ ಪ್ರೀತಿ ಸಂಭ್ರಮಿಸಿ ಮೇಳೈಸಲು
ಉತ್ಸವದಿ ಈಕ್ಷಿಸುತ ಮೆಟ್ಟಲೇರಿದ ತಿಮ್ಮ ಜೊತೆಯಲಿ

ತನ್ನ ಪತ್ನಿಯರೊಡನೆ ಬಕುತರ ಮುಂದಿರಿಸಿ
ತಾಳ ತಾಂಬೂರಿ ಕುಣಿತ ಹೆಜ್ಜೆಗಳೊಡನೆ

ಭಗವಂತನ ದರ್ಶನ ಬೆಟ್ಟದ ಮೇಲೆ
ಅಲಂಕರಿಸಿ ನಿಂತ ತುಳಸಿ ಪುಷ್ಪ ಸುಗಂಧದಲಿ

ಸ್ತೊತ್ರ ಸೂಕ್ತಗಳಲಿ ಪೂಜೆ ಪುರಸ್ಕಾರಗಳಲಿ
ಸಜ್ಜನರ ಭಕ್ತಿ ಕರಗಿ ಕಣ್ಣಿನಲಿ
ಆನಂದ ಬಾಷ್ಪ ಸುರಿಯೆ

ವೈಕುಂಠ ಬಿಟ್ಟು ಬಂದು ನಿಂತ ನೊಡೆ
ತಿಮ್ಮಪ್ಪ ಪರಿವಾರ ಸಹಿತನಾಗಿ

ಹಿಂದೆ ಕಂಡಿಲ್ಲ ಮುಂದೆ ಕಾಣುವ ಯೋಗ
ಪುಣ್ಯ ಜೀವಿಗಳಿಗೆ ಮಾತ್ರ ಈ ಸೋಜಿಗದ ಸೊಬಗು

ತಿಂಡಿ ತಿನಿಸುಗಳು ಭರ್ಜರಿ ಭೋಜನ
ನೆನೆಪಾಯಿತು ತಿಮ್ಮಪ್ಪನ ಕಲ್ಯಾಣ ಕಥೆಯು

ನಮ್ಮ ಆಚಾರ್ಯರ ಕುಟುಂಬಕ್ಕು ಬಂದ
ಭಕ್ತರುಗಳಿಗು, ಬಾರದೆ ಇದನು ಓದಿದ
ಎಲ್ಲ ಸಜ್ಜನರಿಗು ತಿಮ್ಮಪ್ಪ ಅಭಿನ್ನ
ಮುದ್ದು ಮೂಗೂರು ಗೋಪಾಲ ಕರುಣಿಸಲಿ ಸಂತತನುಡಿ ದೇವಿ ನುಡಿಸೆನ್ನ ನುಡಿಗಳ



ಶ್ರೀಮತಿ ವಾಣಿ ರಾವ್

AtmeshArpaNe Mettilotsava 2025

🙏 ॥ भारतीरमणमुख्यप्राणान्तर्गत श्रीकृष्णार्पणमस्तु ॥  🙏